ಶೂನ್ಯ



ಏನಿಲ್ಲದ ಜಗತ್ತಿನಲ್ಲಿ ಏನನ್ನೋ ಹುಡುಕುವುದೇಕೆ
ಕಳೆದು ಹೋದದ್ದದು ಏನೆನ್ನುವ ಅರಿವೇ ಇಲ್ಲದೆ,
ಅಂತ್ಯವಿಲ್ಲದಂತ್ತೆ ಓಡುತ್ತಲೇ ಇವೆ ಕತ್ತಲು ಬೆಳಕುಗಳು
ಮತ್ತೇನಕ್ಕೆ ಏನನ್ನೋ ಕೂಡಿಡುವೆ ಈ ಖಾಲಿ ಜಗ್ಗತ್ತಿನಲ್ಲಿ.

ಗುಳ್ಳೆಗಳಂತಹ ಆಸೆಗಳನ್ನ ಅದೆಷ್ಟು ಕೂಡಿಡುವೆ
ಕಾಲದ ಪ್ರವಾಹಕ್ಕೆ ಸಿಲುಕಿದಾಗ ಎಲ್ಲವೂ ಎಲ್ಲರೂ ಖಾಲಿ,
ಬೆಟ್ಟದೆತ್ತರಕ್ಕೆ ಬೆಳೆದು ಆತ್ಮಕ್ಕಂಟಿದ ಕೊಳೆಗಳವು ಇನ್ನಷ್ಟು ಎತ್ತರಕ್ಕೆ ಏರುತ್ತಲೇ ಇವೆ
ಅವುಗಳನ್ನ ಅಳಿಸುವುದ ಬಿಟ್ಟು ಮತ್ತೇಕೆ ಕಟ್ಟುವೆ ಶೂನ್ಯದೊಳಗೆ ಶಯನಗಳ.

ಬದುಕಿನ ಆಗುಹೋಗುಗಳವು ಆಗುವವು ಹೋಗವವು
ಅವುಗಳನ್ನೇಕೆ ಹಿಂಬಾಲಿಸುವೆ ಬಿಟ್ಟು ನಿನ್ನ ಆತ್ಮವನ್ನ ಮೈಲಿಗಳಷ್ಟು ದೂರ,
ಕೂಡಿಡು ನಿನ್ನೊಳಗೆ ಒಂದೇ ನಾದದ ಮೋಕ್ಷದನುರಣನ
ಇಂದಲ್ಲ ನಾಳೆಯಾದರು ಸಿಗುವುದಿದೆ ಅವನೆಂಬ ಬೃಹತ್ ಶೂನ್ಯ.

                                                      ...........ಬಸವ.

Comments

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ