ಇಂದು ನಾ ಗಂಡಸು ವರವೋ ಶಾಪವೋ?
ವಿಧಿ ವಿಧಿಸಿದ ಶಾಪವೋ ವರವೋ, ನಾ ಇಂದು ಗಂಡಸು
ಎಲ್ಲವೂ ನನ್ನಿಂದಲೇ ಆಗಬೇಕೆಂಬ ಬದುಕಿನ ಅಲಿಖಿತ ಜೀತ.
ಹೊರೆಯಾದ ಹೆಗಲ ಮೇಲೂ ಹೊರೆ ಹೊರುವ ಹೊರೆಗೆ ಜವಾಬ್ದಾರಿಯ ಹೆಸರಿಟ್ಟ ಸಮಾಜದಲ್ಲಿ,
ಈ ಜವಾಬ್ದಾರಿಗೆ ನಾ ಗಂಡಸು ವರವೋ ಶಾಪವೋ?
ಅಳಲು ನನ್ನಲ್ಲಿಯೂ ಕಣ್ಣೀರಿದ್ದರೂ,
ಭಾವಜೀವಿಯಾಗಲು ನನ್ನಲ್ಲೂ ಭಾವನೆಗಳಿದ್ದರೂ,
ದಣಿದ ದೇಹಕ್ಕೆ ವಿಶ್ರಾಂತಿಯ ಹಂಬಲವಿದ್ದರೂ,
ನಾ ಇಂದು ಗಂಡಸಾಗಿ ತ್ಯಾಗಗೈಯ್ಯಲೇಬೇಕಿದೆ.
ಈ ತ್ಯಾಗಕ್ಕೆ ನಾ ಗಂಡಸು ವರವೋ ಶಾಪವೋ?
ಇಂದು ನಾ ಏನನ್ನೂ ಅರಿಯದಿದ್ದರೂ,
ಎಲ್ಲವನ್ನೂ ನಾ ಕೇಳಿ, ಸುಧಾರಿಸಿ, ಸಾಗಿಸಬೇಕು.
ಬದುಕಿನ ಬಂಡಿಗೆ ನೀನೊಬ್ಬನೇ ಎತ್ತು ಎಂಬ ನಿಯಮಾವಳಿ.
ನಾ ಬೆವತು ಬಸವಳಿದರೂ, ಬದುಕಿನ ಸಾಗಾಟಕ್ಕೆ ಮತ್ತೆದ್ದು ನಿಲ್ಲಬೇಕು.
ಈ ಬೇಗೆಗಳಿಗೆ ನಾ ಗಂಡಸು ವರವೋ ಶಾಪವೋ?
.......ಬಸವ.
Comments
Post a Comment
Thank you