ಲೋಹದ ಹಕ್ಕಿ.
ಲೋಹದ ಹಕ್ಕಿಯಲ್ಲಿ
ಮೋಡಗಳ ಕಣ್ಮರೆಯಲ್ಲಿ
ತೇಲುವ ಅನುಭವಕ್ಕೆ ನಾನು ಮೋಹಿತನಾದೆನು.
ಹಾಗೊಮ್ಮೆ ಹೀಗೊಮ್ಮೆ ಹೊರಳುವ ಹಕ್ಕಿ
ಮೇಲಕೊಮ್ಮೆ ಹತ್ತುವುದು, ಕೆಳಗೊಮ್ಮೆ ಇಳಿಯುವುದು
ಬಲಕೊಮ್ಮೆ ಎಡಕ್ಕೊಮ್ಮೆ ವಾಲುವುದು, ತೇಲುವುದು ನಭದೊಳಗೆ.
ಬಿರ್ರನೆ ಸೀಳುತ್ತಾ ಗಾಳಿಯನ್ನು
ಹೊತ್ತೊಯ್ಯುವುದು ಆಗಸದೊಳಗೆ.
ಕಿವಿಯೊಳಗಿನ ಪದರುಗಳ ನಿಮಿರಿಸುತ,
ಹೊಟ್ಟೆಯೊಳಗೆ ಗಾಳಿಯ ತೇಲಿಟ್ಟು
ಹಾಯಾಗಿ ಹಿತವಾಗಿ ಹಾರುವುದು ನಭದೊಳಗೆ.
..........ಬಸವ.
Comments
Post a Comment
Thank you