ಅಳುವ ನೋವುಗಳು.
ಇಂದೇಕೋ ನೋವುಗಳು ಅಳುತ್ತಿವೆ
ನೆನಪುಗಳ ಬೇನೆಯಲ್ಲಿ ಬೇಯುತ್ತಿವೆ.
ಮತ್ತೆ ಮತ್ತೆ ಅವಳ ಅಸ್ತಿತ್ವದ ನೆನಪುಗಳನ್ನ
ನನ್ನೆದುರಿಗೆ ತಂದೊಡ್ಡಿ ನೋವುಗಳು ಅಳುತ್ತಿವೆ.
ಅದೆಷ್ಟು ಗಡುಸಾಗಿಯೇ ದ್ವೇಷಿಸಿತ್ತು ಆ ಧ್ವನಿ
ತೆಳುವಾದ ಕಣ್ಣೀರುಗಳು ಕಣ್ಣಲ್ಲಿಯೇ ಇಟ್ಟುಕೊಂಡು.
ಆಲಿಂಗನಕ್ಕೆ ಒಲ್ಲೆನೆನ್ನುವ ಎದೆಯೊಳಗಿನ ಹೃದಯ
ಇನ್ನಷ್ಟು ಜೋರಾಗಿ ಬಡಿದು ಬಾ ಎಂಬುದ ನಾ ಕಂಡಿದ್ದೆ.
ವಿರಹದಲ್ಲಿ ಚಿತ್ಕರಿಸುವ ಒಲವಿಗೆ ದನಿಯೊಂದ ಬೇಕಿತ್ತು
ಕೇಳಿಸಿದರೂ ತನಗೆ ಕೇಳದೆ ಹೋಯಿತೆಂದ ನಗುವಿನ ಅಳು ಇಂದಿಗೂ ನನ್ನೆದುರಿಗೆ ಅಳುತ್ತಲೇ ಇದೆ.
ನನ್ನೊಲವು ಎಲ್ಲಾ ಕರಾರುಗಳನ್ನ ಇಂದಿಗೂ ಆಪ್ಯಾಯಮಾನವಾಗಿ ಪಾಲಿಸುತ್ತಿದೆ.
..............ಬಸವ.
Comments
Post a Comment
Thank you