ಪ್ರೇಮಗೀತೆ.

ಪ್ರೇಮಗೀತೆಯೊಂದ ಹೇಳುವಾಸೆ
ಕೊನೆಯದೊಂದು ಬಾರಿಗೆ,
ಮನಸೂರೆಗೊಳಿಸಿದ ನನ್ನೊಲವ ಮಯೂರಿಗೆ
ಮೇರು ಪರ್ವತದಷ್ಟು, ಸಾಗರ ಆಕಾಶದಷ್ಟು ಪ್ರೇಮಗೀತೆಯೊಂದು ಹೇಳುವಾಸೆ.

ಸಂಜೆ ಚಂದ್ರನ ಕಣ್ ತಪ್ಪಿಸಿ,
ನಲಿವ ಗುಲಾಬಿಯಿಂದ ಕಣ್ ತಪ್ಪಿಸಿ,
ಕುಣಿವ ನವಿಲಿನಿಂದ ಕಣ್ ತಪ್ಪಿಸಿ,
ಯಾವ್ ಚೆಲುವಿನ ದೃಷ್ಟಿಯೂ ಬೀಳದಂತ್ತೆ
ನನ್ನೊಲವ ರಾಣಿಗೆ ಪ್ರೇಮಗೀತೆಯೊಂದು ಹೇಳುವಾಸೆ.

ಮತ್ತೆಂದೂ ಮತ್ತಾರಿಗೂ ಸಿಗದ ಶಬ್ದಗಳ ಪೋಣಿಸಿ,
ನನ್ನ ಅವಳ ಒಲವಷ್ಟೇ ಕೇಳುವ ರಾಗದಲ್ಲಿ,
ಹೃದಯದ ಬಡಿತಗಳೇ ಸಂಗೀತವಾಗಿಸಿ,
ಕಣ್ಣೋಟಗಳ ಕೊಳಲ ನುಡಿಸಿ,
ಒಮ್ಮೆ ನನ್ನಾಕೆಯ ಮನಸ್ಸು ತಣಿಸುವಂತ್ತೆ ಪ್ರೇಮಗೀತೆಯೊಂದ ಹೇಳುವಾಸೆ.

ಇನ್ನೆಂದೂ ಇನ್ನಾರಿಗೂ ಲಭಿಸದ ರಾಗದಲ್ಲಿ,
ನನ್ನವಳಿಗಾಗಿಯೇ ಮೀಸಲಿಟ್ಟ ಶೃತಿಯಲ್ಲಿ,
ಜಗವೆಂದೂ ಕಾಣದ ಹಾವ ಭಾವದಲ್ಲಿ,
ಹಸಿರು ಇಳಿಸಂಜೆಯ ಕಾಮನಬಿಲ್ಲಿನ ಬೆಳಕಿನಲ್ಲಿ,
ನನ್ನ ಹೃದಯದ ರಾಣಿಗೆ ಒಂದೊಮ್ಮೆ ಕೊನೆಯ ಪ್ರೇಮಗೀತೆ ಹೇಳುವಾಸೆ.

                  .......ಬಸವ.

Comments

Popular posts from this blog

ನೆನಪುಗಳದ್ದು ಸ್ವೇಚ್ಛಾಚಾರ.

ಬಾಬಾ ಶಿವಾನಂದ - ಒಂದು ವ್ಯಕ್ತಿ ಪರಿಚಯ.

ಮನಸ್ಸು ಮೌನಕ್ಕೆ ಶರಣಾಗಿದೆ.