ನೆನಪುಗಳ ಮಳೆ.

ಆಗಾಗ ಅವಳ ನೆನಪುಗಳು ಸಂಧಿಸಿ ಹೋಗುತ್ತಿರುತ್ತವೆ ಜೋರಾಗಿಯೇ ಸುರಿಯಲು ಬಂದ ಮಳೆ ಕೆಲ ಹನಿಗಳ ಉದಾಹರಣೆ ತೋರಿಸಿ ಹೋದ ಹಾಗೆ.

ಜೋರಾಗಿ ಸುರಿಯದೀದ್ದರೂ ನೆಲಕಪ್ಪಿ ಹಬ್ಬಿಸಿದ ನೆನಪುಗಳ ಕಂಪು ಗಾಢವಾಗಿಯೇ ಆವರಿಸಿದೆ. 


ನೆನಪುಗಳ ಹನಿ ಹಗುರವಾಗಿ ಮುದವೇನೋ ನೀಡುತ್ತವಾದರೂ

ಭಯಂಕರವಾಗಿ ಆವರಿಸಿ ಸೃಷ್ಟಿಸುವ ಪ್ರವಾಹದ ಭಯವು ಜೊತೆಗಿರುವುದು.

ಜೋರಾದ ಸಿಡಿಲು ಗುಡುಗುಗಳಂತ್ತೆ ಕೆಲ ನೆನಪುಗಳು ಹೆದರಿಸಿಯೂ ಹೋಗುತ್ತವೆ.


ನೆನಪುಗಳ ಜೋರು ಮಳೆಗೆ ತತ್ತರಿಸದೆ ಉಳಿಯಬಹುದಿತ್ತೇನೋ

ನನ್ನೊಲವೀಗ ಮತ್ತೊಂದು ಒಲವಿನ ಮಾಳಿಗೆಯೊಳಗೆ ಬೆಚ್ಚಗೆ ಅವಿತು ಕುಳಿತಿದ್ದರೆ.

ಬಟಬಯಲಿನ ಒಂಟಿ ಬದುಕಿಗೆ ನೆನಪುಗಳ ಜಿಟಿ ಮಳೆಯೂ ಸಾಕು ಕಣ್ಣೀರುಗಳ ತುಂತುರಿಗೆ.

                                                 ........ಬಸವ.

Comments

Popular posts from this blog

ನೆನಪುಗಳದ್ದು ಸ್ವೇಚ್ಛಾಚಾರ.

ಬಾಬಾ ಶಿವಾನಂದ - ಒಂದು ವ್ಯಕ್ತಿ ಪರಿಚಯ.

ಮನಸ್ಸು ಮೌನಕ್ಕೆ ಶರಣಾಗಿದೆ.