ಕರಗುವ ಕಾರ್ಮೋಡಗಳು.

ಕಾರ್ಮೋಡದ ಕತ್ತಲೆಯಲ್ಲಿ ಹತಾಶೆ ಕಂಡ ಬದುಕಿಗೆ
ನೀರ್ ಹೊಯ್ದು, ಸಾಂತ್ವಾನಿಸಿ ಹಸಿರೊಡೆಸಿದ್ದು ಅದೇ ಕಾರ್ಮೋಡಗಳು.
ಇದೀಗ ಅಗಸಕ್ಕೆ ಪರಕೀಯವೆಂಬ್ಬಂತೆ ಸಂಪೂರ್ಣವಾಗಿ ಕರಗಿ ನೆಲಕಪ್ಪಿವೆ.

ಸಂತೃಪ್ತ ಭಾವದದೊಂದು ಕಣ್ಣೀರ ಹನಿಯ ಅಪ್ಪುಗೆಗೆ ಇಂದು ಅದೇ ಮೋಡಗಳು ನೆಲದಲ್ಲೆಲ್ಲೂ ಸಿಗದಿದ್ದರೂ ಸಾಗರದೊಂದು ಬೃಹತ್ ಅಲೆಯಲ್ಲಿ ಹನಿಯಾಗಿಯಾದರೂ ಜೀವಂತಾಗಿವೆ. 

ಇದೀಗ ಅಲೆಗಳಾಗಿ ಬರುವ ಎಲ್ಲಾ ಅಲೆಗಳಿಗೊಂಡೊಂಡು ಕಣ್ಣೀರ ಹನಿಯ ಋಣವೊಂದು ಬಾಕಿ ಇದೆ.


ಇಲ್ಲಿಗೆ ಇಷ್ಟೇ ಎಂಬಂತೆ ಪೊಟ್ಟಣದೊಳಗೆ ಕೂಡಿಟ್ಟ ಬದುಕಿನ ಭಾಗ್ಯಗಳನ್ನ ಒಂದೊಂದಾಗಿಯೇ ಹಂಚುವವನಿಗೆ ಅದಾವ ಅವಸರವೂ ಇಲ್ಲ.

ಇಂದಿಗೆ ಹೀಗೆ, ನಾಳೆಗೆ ಇನ್ನೇಹೆಗೊ  ಮತ್ಹೇಗೋ ತಿರುವುಗಳೇ ಕೂಡಿರುವ ಬದುಕಿನಲಿ. ಅವನಾಗಿಯೇ ಕೃತಜ್ಞತೆ ಒಲ್ಲೆನೆಂದರೂ ಅವನೆಂದಿಗೂ ಅರ್ಹನೆಂಬ ಅರಿವೊಂದಿರಲಿ.

                                      ........ಬಸವ.

Comments

Popular posts from this blog

ನೆನಪುಗಳದ್ದು ಸ್ವೇಚ್ಛಾಚಾರ.

ಬಾಬಾ ಶಿವಾನಂದ - ಒಂದು ವ್ಯಕ್ತಿ ಪರಿಚಯ.

ಮನಸ್ಸು ಮೌನಕ್ಕೆ ಶರಣಾಗಿದೆ.