ಒಲವು ರಿಕ್ತ ರಿಕ್ತ.


ಒಲವು ಬೆಸೆಯುವುದಕ್ಕೇಕೆ ಬೇಹುಗಾರಿಕೆ?
ಬಯಸದೆಯೂ ಮೂಡುತ್ತಿಹುದಲ್ಲ ಭಾವಗಳ ಸೆಲೆ.
ಎಲ್ಲವೂ ಹೊಂದಿಸಿಯೂ ಹೊಂದಿಕೊಳ್ಳದಾದಾಗ,
ಎಲ್ಲವೂ ತ್ಯಜಿಸಿ ಹುಡುಕುವ ಗೋಜಿಗೆ ಗೈರಾದಾಗ
ಒಲವು ಮತ್ತೆ ರಿಕ್ತ ರಿಕ್ತ.

ಒಲವು ಅಲೆಯುತ್ತಲೇ ಇದೆ ಅತ್ತಿತ್ತ ಹುಡುಕುತ್ತ
ಸಿಕ್ಕಿತ್ತೇನೋ ಅನ್ನುವ ಭರವಸೆಯಲ್ಲಿ ಸ್ವಚ್ಚಂದ ಬೆಸುಗೆ,
ಅಡಗುತ್ತಿವೆಯೇನೋ ಮೊಡದೊಳಗೆ ಅಡಗಿದ ಚುಕ್ಕಿಗಳಂತ್ತೆ
ಬೆಸೆಯಲೊಗ್ಯ ಒಲವುಗಳು,
ನಗು ಅಳುಗಳ ದಾಟಿಯೂ ಎಲ್ಲಿಯೂ ಏನನ್ನೂ  ಕಾಣದಾದ
ಒಲವು ಮತ್ತೆ ರಿಕ್ತ ರಿಕ್ತ.

ಆತ್ಮೀಯತೆಯ ಆಥಿತ್ಯದಲ್ಲೇಕೆ ಸ್ವಾಮ್ಯಸೂಚಕತೆ?
ಬಂಧನವಿಲ್ಲದ ಒಲವಿನ ಬಿಡುವಿಗೇಕೆ ಅಸಂಬಂಧಿತ ಪರವಾನಿಗೆಯ ಗೋಜು
ಭಾವಗನ್ನಡಿಯ ಎಲ್ಲಾ ರೂಪಗಳು ತಾತ್ಕಾಲೀಕವೆಂದರಿತು, ಒಲವ ಬೆಸುಗೆಗೆ  ಅಧಿಕೃತ ನಾಂದಿಹಾಡಿದಾಗ
ಒಲವು ಮತ್ತೆ ರಿಕ್ತ ರಿಕ್ತ.

                                               .............ಬಸವ.

Comments

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ