ಹಸನ್ಮುಖಿಯಾಗಿ.



ಬೆಳಕು ಕತ್ತಲಿನಾಟದಲ್ಲಿ
ಬೀಗುವುದೇಕೆ ಕುಗ್ಗುವುದೇಕೆ,
ಕತ್ತಲಾದರು ಒಂಧ್ಹೊತ್ತು
ಬೆಳಕಾದರೂ  ಒಂಧ್ಹೊತ್ತು.

ಅಳುವ ಅಳುವಿನ ಆಳ
ಅತ್ತಾದಮೇಲಾದರೂ ಅರಿಯುವುದಿದೆ,
ಜೀವಿಸಲಿಕೆ ಏನಿಲ್ಲ ತೆರಿಗೆ ಇಲ್ಲಿ
ಮತ್ತೆಕೆ ನಗುವಲ್ಲಿ ಎಲ್ಲಿಲ್ಲದ ತಕರಾರು.

ಮೂಡುತ್ತಿರಲಿ ಬಯಕೆಗಳು ನಿರ್ಗಳತೆಯಲ್ಲಿ,
ನಾ ನೀನಾದದ ಪೈಪೋಟಿಗಳಲಿ
ದುಃಖಿಸದೆ ದಕ್ಕಿದವನ ಭಾಗ್ಯದ ಪಾಲುದಾರನಾಗಿ
ಕುಳಿತಿರು ಮತ್ತೊಂದು ಪಂಕ್ತಿಯಲ್ಲಿ ಹಸನ್ಮುಖಿಯಾಗಿ.

                                                      .........ಬಸವ.

Comments

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ