ಅಪರಿಚಿತ ನಾನು.

ಪ್ರತಿಬಾರಿಯೂ ತನ್ನದೇ ವ್ಯಾಖ್ಯಾನಗಳನ್ನ ಪ್ರತಿಪಾದಿಸುವ ಸಂಬಂಧವನ್ನ ಮುಟುಕುಗೊಳಿಸುವಲ್ಲಿಗೆ ನಾ ಅಪರಿಚಿತ,
ಪ್ರತಿಯೊಂದು ಪೂರ್ಣವಿರಾಮ ವಿರಾಮವಲ್ಲದೆ ತಾತ್ಕಾಲಿಕ ವಿರಾಮವದು ಬದುಕಿನ ಪುಸ್ತಕದಲ್ಲಿ ಎಂಬ ವಿಷಯಕ್ಕೆ ನಾ ಅಪರಿಚಿತ,
ಒಂದೊಮ್ಮೆ ಶಾಂತವಾಗಿದ್ದು ಒಮ್ಮೆಲೇ ಭುಗಿಲೇಳುವ ಮನಸ್ಸು ಮತ್ತೊಮ್ಮೆ ಶಾಂತವಾಗುವುದೆಂಬ ಸತ್ಯದಿಂದ ನಾ ಅಪರಿಚಿತ,
ಎತ್ತಲೋ ಹೊಮ್ಮಿ ಹೊಕ್ಕಿ ಬರುವ ಚಿತ್ತಕ್ಕೆ ಚಿಂತೆಯಿಂದ ತುಸು ಹೊತ್ತಾದರೂ ವಿಶ್ರಾಂತಿ ನೀಡಬೇಕೆಂಬುದರಿಂದ ನಾ ಅಪರಿಚಿತ.

ಎಲ್ಲವನ್ನ ಹೊಂದಿಸಿಯೂ ಹೊಂದಿಕೊಳ್ಳದೆ ಹೋದ ಸೆಲೆಗಳನ್ನ ಸಾಲು ಸಾಲಾಗಿ ಕೈ ಬಿಡುವಲ್ಲಿ ನಾ ಅಪರಿಚಿತ,
ಪ್ರತಿಬಾರಿಯೂ ಒಂದು ಕೊನೆಯದು ಎಂಬ ಸದಾವಕಾಶ ಬಯಸಿ ಮತ್ತೆ ಅವಕಾಶಹೀನನಾಗದಿರುವುದರಿಂದ ನಾ ಅಪರಿಚಿತ,
ಮತ್ತೆ ಉಸಿರುಗಟ್ಟುವಲ್ಲೇ ನಿಂತು ಒಂದೊಮ್ಮೆ ಉಸಿರಾಡುವ ಕನಸು ಕಾಣುವುದನ್ನ ಬಿಡುವ ಪರಿಯಿಂದ ನಾ ಅಪರಿಚಿತ,
ಹೇಗಾದರೂ ಸರಿ ಮತ್ತೆ ಎಲ್ಲವೂ ಅಲ್ಲಿಗೆ ಸೇರಿಸುವ ಪ್ರಯತ್ನಕ್ಕೆ ಮುಂದಾಗಿ ಮತ್ತೆ ಹಿಂದಿರುಗದಂತಿರುವಲ್ಲಿಗೆ ನಾ ಅಪರಿಚಿತ.

ಲಕ್ಷಬಾರಿಯಾದರೂ ಸತ್ತು ಹುಟ್ಟಿದಮೇಲೆ ಹುಟ್ಟಿದ ಈ ರೂಪಕ್ಕೆ ನಿರೂಪನಲ್ಲಿಗೆ ಲೀನವಾಗಿಸುವದರಿಂದ ನಾ ಅಪರಿಚಿತ,
ಪ್ರತಿಕ್ಷಣಕ್ಕೂ ನನ್ನಾತ್ಮ ಮೋಕ್ಷಕ್ಕಾಗಿ ಹವಣಿಸುತ್ತಲಿದ್ದರೂ ಮತ್ತೆ ನಾ ಮಾಯೆಗೆ ಸೊಲದೇಇರುವಲ್ಲಿಗೆ ನಾ ಅಪರಿಚಿತ,
ಬೋದಿಸುವವರು ಬೇಕಾದಷ್ಟಿದ್ದರೂ ಬೋಧಿವೃಕ್ಷವೇ ಬೇಕೆಂದು ಬಳಲದೇಇರುವಲ್ಲಿಗೆ ನಾ ಅಪರಿಚಿತ,
ಅಲ್ಲಿಗಿಲ್ಲಿಗೆ ಎಲ್ಲದರಲ್ಲಿಯೂ ಎಲ್ಲದಕ್ಕೂ ಪರಿಚಿತನಾಗಿಯೂ ಅಪರಚಿತನಾಗುವ ಈ ವ್ಯಥೆಯಿಂದ ಅಪರಿಚಿತವಾಗುವಲ್ಲಿಗೆ ನಾ ಅಪರಿಚಿತ.

                                                  .............ಬಸವ.

Comments

  1. Super 👌🏻

    ReplyDelete
  2. Wonderfully written ...

    ReplyDelete
  3. ತತ್ವ ಭಾವದಿಂದ ಕೂಡಿದೆ. ನಿನ್ನ ಈ ಪ್ರಯತ್ನ ಹಾಗು ಪಯಣ "ನೀ ಎಲ್ಲರಿಗೂ ಓ! ಪರಿಚಿತ" ಅನ್ನುವಷ್ಟು ಹಿರಿದಾಗಲಿ. ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.

    ReplyDelete

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ