ಕೆಲವು ಲೆಕ್ಕಾಚಾರಗಳು.

ಬಿಟ್ಟಿರಲೇಬೇಕಿತ್ತು ಕೆಲವು ಲೆಕ್ಕಾಚಾರಗಳು
ಕೆಲವು ಮನದಾಚೆಗೆ ಇನ್ನೂ ಕೆಲವು ಹೃದಯದಾಚೆಗೆ
ಬಿಟ್ಟಿರಬೇಕಿತ್ತು ಲೆಕ್ಕಿಸದೆ ಕೆಲವು ಲೆಕ್ಕಾಚಾರಗಳ,
ದಿಕ್ಕು ದೊರೆತರೂ ದಿಕ್ಕುತಪ್ಪಿಸುವಂತಹ
ದಡ ತಲುಪಿದರೂ ಇನ್ನೆಲ್ಲಿಗೋ ತಲುಪಿಸುವಂತಹ  ಎಲ್ಲಿಯೂ ಬೇಡದ ಲೆಕ್ಕಾಚಾರಗಳ ಬಿಟ್ಟರಲೇಬೇಕಿತ್ತು.

ಕಣ್ಣೋಟ ಬೆರಸುವ ಮೊದಲು, ದನಿಗೆ ದನಿಗೂಡಿಸುವ ಮೊದಲು,
ಅರಿಯುವ ಮೊದಲು ಬೆರೆಯುವ ಮೊದಲು,
ಬೆಸೆಯುವ ಮೊದಲು ಬೆಸೆದು ಬೇಯುವ ಮೊದಲು,
ಎಲ್ಲವೂ ಮುಗಿದು ಹೊತ್ತಾದಮೇಲೆ ಹೊಂದಿಸುವ  ಮೊದಲು,
ಒಲವಿನ ಆತಿಥ್ಯ ಅತೀತವಾಗುವ ಮೊದಲೇ
ಬಿಟ್ಟಿರಲೇಬೇಕಿತ್ತು ಕೆಲವು ಲೆಕ್ಕಾಚಾರಗಳ.

ಯಾವುದು ಯಾವ ಯತ್ನಕ್ಕೆ ದಕ್ಕುವುದೋ, ಯಾವ ತಂತ್ರಕ್ಕೆ ದಕ್ಕುವುದೋ ಎಂದರಿಯುವ ಮುನ್ನವೇ,
ದಕ್ಕುವುದದು ದಕ್ಕುವ ದಿಕ್ಕಲ್ಲೆ ಇರುವುದು ಎಂದರಿಯುವ ಮುನ್ನವೇ,
ಮಾಗದ, ಮರೆಯಲಾಗದ ನೆನಪುಗಳ ಹುಟ್ಟಿಸಿ ಮತ್ತೆ ಮರೆಯಲೆತ್ನಿಸುವ  ಮುನ್ನವೇ,
ಅತ್ತಿತ್ತಲಿನ ಅರ್ಥರಹಿತಕ್ಕೆ ಅಂತರಂಗ ಅಳುಕಿ ಅಳುವ ಮುನ್ನವೇ,
ಬಿಟ್ಟಿರಲೇಬೇಕಿತ್ತು ಕೆಲವು ಲೆಕ್ಕಾಚಾರಗಳ.

ಇಲ್ಲಿ ನಾನಾರು ನೀನಾರು ಎಂಬ ಪ್ರಶ್ನೆಯ ಪ್ರಶ್ನಿಸುವ ಮುಂಚೆಯೇ,
ಅವನ ಅರೆಯಲು ಅರಿವಿಗೆ ಬೇಕಿದ್ದ ಮಂತ್ರ ಅರಿತು ಮರೆಯುವ ಮುಂಚೆಯೇ,
ಅಲೌಕಿಕವ ಅರೆತು ಮರೆತು, ಲೌಕಿಕದ ದಾಸ್ಯನಾಗುವ ಮುಂಚೆಯೇ,
ಬಿಡಲೇಬೇಕಿತ್ತು ಕೇಲವು ಲೆಕ್ಕಾಚಾರಗಳ
ತನ್ನ ತಾನೇ ಹೊಂದಿಸಿಕೊಂಡು ಹೋಗುವ ಬದುಕಿನಲ್ಲಿ ಬಿಡಲೇಬೇಕಿತ್ತು ಕೆಲವು ಲೆಕ್ಕಾಚಾರಗಳ.
                                                  ........ಬಸವ.

Comments

  1. Amazing. Well written Basu 👌

    ReplyDelete
  2. Chennagide 🙌🙌

    ReplyDelete
  3. Superb bro ✌️👌

    ReplyDelete
  4. 👌🏻👌🏻

    ReplyDelete
  5. Wonderfully written as usual..superb

    ReplyDelete
  6. Everyone learnt same 49 kannada letters ..but as a writer the permutation and combination of those letters to make beautiful poems ..is just wonderful ...superb

    ReplyDelete

Post a Comment

Thank you

Popular posts from this blog

ಮರೆಯಾದನೆ ಅವನು?

ಅರಿಯಲೇಬೇಕಿದೆ