ಅರಿಯಲೇಬೇಕಿದೆ

ಅರಿಯಲೇಬೇಕಿದೆ
ಹಲವು ಸಲ್ಲದ ವಿಷಯಗಳಿಗೆ ಏಕಕಾಲಕ್ಕೆ ಗೈರಾಗುವುದ,
ಬೇಕಾಗಿಯೂ ಬೇಡವಾದ ಸಂಬಂಧಗಳ ಮುಟುಕುಗೊಳಿಸುವುದ,
ಇಂದಾವುದೋ ಮುಂದಾವುದೋ ಎನ್ನುವ ಮಂಪರುಗಳ ಮರೆಯುವುದ,
ಅರಿಯಲೇಬೇಕಿದೆ ಯಾವುದಕ್ಕೂ ಇರಿಸು ಮುರಿಸಾಗದೆ ಇತಿ ಹಾಡುವುದನ.

ಅರಿಯಲೇಬೇಕಿದೆ 
ಆಗಾಗ ಹುಟ್ಟುವ ಸಲ್ಲದ ಸಂಬಂಧಗಳ ಜಟಿಲತೆಗಳ,
ಮನದ ತಿಳಿನೀರಿಗೆ ಎಲ್ಲಿಂದಲೋ ತೆಳುವಾಗಿ ಸೇರಿದ ಸಂಬಂಧವದು ತ್ರಾಣವೋ ನಿತ್ರಾಣವೋ ಎಂಬುದ,
ಲೌಕಿಕದ ಇಂದು ಇಲ್ಲಿಗೆ ಒತ್ತಿಕ್ಕಲೇಬೇಕಾದದ್ದು ಅಲ್ಪ ವಿರಾಮವೋ, ಪೂರ್ಣವಿರಾಮವೋ ಎಂಬುದ,
ಅರಿಯಲೇಬೇಕಿದೆ ಇಂದು ಯಕಶ್ಚಿತ ನಂಟುಗಳ ಅಂಟುತನದ ಭಿಭತ್ಸತೆ.

ಅರಿಯಲೇಬೇಕಿದೆ
ಇಂದು ಎಲ್ಲವೂ ಕತ್ತಲಾಗಿರುವುದಕ್ಕೆ ಕಣ್ಣ ಕುರುಡೋ, ಮನದ ಕುರುಡೋ ಎಂದು,
ಎಲ್ಲೆಡೆ ಬಿತ್ತರಿಸುವ ಭಾವರಹಿತ ಸಂಬಂಧಗಳೇ ಏಕೆ ಇಷ್ಟು ಅರ್ಥಪೂರ್ಣವೆಂದು,
ಎಲ್ಲವೂ ನಿರಾಷೆಯೆಂದರಿತರೂ ಸದಾಶಯಗಳನ್ನೇ ಕೇಳಪಡುವ ಮನದ ಹುಚ್ಚಾಟವ,
ಅರಿಯಲೇಬೇಕಿದೆ ಯಾವುದೋ ಹೊತ್ತಿಗೆ ಹೊತ್ತಿ ಉರಿಯುವ ವಿದಾಯದ ಸೆಲೆಗಳೇಕೆ ಅರಿವಿಗೆ ಬಾರಲಿಲ್ಲವೆಂಬುದ.
                                          ..............ಬಸವ.

Comments

  1. ಅರಿಯಲೇ ಬೇಕಾಗಿದೆ ಹುಟ್ಟು ಸಾವುಗಳ ನಡುವಿನ ಜೀವನ

    ReplyDelete
  2. 👌🏻👌🏻👍🏻👍🏻

    ReplyDelete
  3. Keep going ..!!! Hoping all success to your way .❤️

    ReplyDelete
  4. Super 👌🏻

    ReplyDelete

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.