ಮರೆಯಾದನೆ ಅವನು?

ಹೃದಯಕಮಲದೊಳಗೆ ಅವಿತು ಅತ್ತಲಿತ್ತಕಡೆ ಅಲ್ಲದೆ
ಹೀಗೆ ದೂಡೆಂದು ಮುನ್ನಡೆಸುತ್ತಿದ್ದವನು ಮರೆಯಾದನೇ?
ನನ್ನೊಳಗೆ ಕಷ್ಟವಾಯಿತೆಂದು ಕೈಲಾಸದಲ್ಲೋ, ಕಾಶಿಯಲ್ಲೊ, ಅವನದೇ ಸಕಲದಲ್ಲೆಲ್ಲೋ ಮರೆಯಾದನೇ?
ಎಲ್ಲವೂ ಕತ್ತಲಾಯಿತೆಂಬ ಭಾವ ಬಿತ್ತಿ ನನ್ನೊಳಗಿನಿಂದ ನಿರುಮ್ಮಳವಾಗಿ ಮರೆಯಾದನೆ?

ಸಲ್ಲದ ಎಲ್ಲವೂ ಅಪ್ಪಿಕೊಳ್ಳುತ್ತಿದ್ದರೂ, ಒಪ್ಪದೇ ಅವನನ್ನೇ ಅರಿಯುವುದ ಬಿಟ್ಟದಕ್ಕೆ ಮುನಿದು ಮಾಯವಾದನೆ?
ಎಲ್ಲಿಂದಲೋ ತಿಳಿದು ತುಳಿದು ಬಂದ ಮೋಕ್ಷಾದ್ಹಾದಿಯ ನಾನೀಗ ಮರೆತ್ತದ್ದಕ್ಕೆ ಪ್ರತ್ಯುತ್ತರವಿಲ್ಲದೆ ಮಾಯವಾದನೆ?
ಪ್ರಿಯವಲ್ಲದವುಗಳಿಗೆ ನಾ ಪ್ರಿಯವಾದದ್ದಕ್ಕೆ ನನ್ನೊಳಗಿನಿಂದ ತಿಳಿಯಾಗಿ ತಾಪಗೊಂಡು ಮಾಯವಾದನೆ?

ಮೋಕ್ಷ ಮರೆತ್ತಿದ್ದೆಲ್ಲಿ ಎನ್ನುವ ಎಣಿಕೆಗಳ ಮುಂದಿಟ್ಟರೂ,
ಮಾಯೆ ಮೊದಲಾಗಿಯೂ ಗುರುತಿಸಿ ನನ್ನ ಗಮನಕ್ಕಿಟ್ಟರೂ,
ಎಡವುತ್ತಿರುವ ಹೆಜ್ಜೆಗಳ ದಾಪು ಗುರುತಿಸಿ ಹೇಳಿದರೂ,
ಸತ್ಯಮಿಥ್ಯಗಳ, ಕತ್ತಲೇಬೆಳಕುಗಳ ಅರ್ಥ ಬಿತ್ತರಿಸಿಟ್ಟರೂ,
ಸಲ್ಲುವ ಎಲ್ಲವುಗಳಿಗೆ ನಾ ಅರಿಯದೇ ಅಲ್ಲಗಳೆದದ್ದಕ್ಕೆ
ಅರಿವಿಗೂ ಬಾರದಂತೆ ನನ್ನಾತ್ಮದೊಡೆಯ ಮರೆಯಾದನೇ?

                                                  ..........ಬಸವ.

Comments

Post a Comment

Thank you

Popular posts from this blog

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ