ಭಾವ ವಿವಶವಾದಾಗ

ಮತ್ತೆ ಅಂತರ್ಮುಖಿ ನಾನೀಗ
ಒಂದೊಮ್ಮೆ ನಿನ್ನ ನೆನಪುಗಳ ಅಲೆ ಹಾದು ಹೋದಾಗ,
ಕಂಪಿಸಲು ಹಾತೊರೆಯುವ ಬಿಗಿದ ವೀಣೆಯ ತಂತಿಗಳಂತ್ತೆ
ನಿಟಾರಾಗಿ ಕಾಯುತ್ತಿದೆ ಹೃದಯ ಮತ್ತದೇ ಒಲುಮೆಯ ಕಂಪನಕ್ಕೆ ಶ್ರುತಿಗೂಡಿಸಲು,
ನಿನಲ್ಲದೆ ಇನ್ನೆಲ್ಲವೂ ಬರಿ ಭ್ರಾಂತಿ ಎಂಬ ಪರ್ಯಾಯಲೋಕಕ್ಕೆ ಮತ್ತೊಮ್ಮೆ ಕಾಲಿಡಲು ಇಚ್ಚಿಸಿದಾಗ
ಮತ್ತೇ ನಾನೀಗ ಅಂತರ್ಮುಖಿ.

ನನ್ನಲ್ಲಿನ ಹಗಲು ರಾತ್ರಿ ಎಂಬ ಕನಸುಗಳ ಮಧ್ಯೆಗಿನ ಭಿನ್ನವನ್ನ ಹುಸಿಯಾಗಿಸಿದ್ದವಳು ನೀನು,
ಶಾಂತ ಸಾಗರದೋಪಾದಿಯಲ್ಲಿ ನನ್ನೊಳಗೆ ಅಳುಕದೆ ಭರ್ತಿಯಾಗಿ ತುಂಬಿಕೊಂಡಿದ್ದವಳು ನೀನು,
ಒಮ್ಮೆಲೆ ಎಲ್ಲವೂ ಹಗಲುಗನಸೇ ಎಂಬ ನಿಲುವಿನಲ್ಲಿ ನಿ ತಾಳಿದ ಮಹಾಪ್ರಳಯ ನೆನಪಾದಗ
ಮತ್ತೇ ನಾ ಅಂತರ್ಮುಖಿ.

ಅದೆಷ್ಟೋ ಕಾಣದ ಆಂತರಿಕ ಕಲಹಗಳ ಬದಿಗಿಟ್ಟು
ನನ್ನೊಳಗೆ ನಿ,ನಿನ್ನೊಳಗೆ ನಾ ಎಂಬಂತ್ತೆ ಬೆರೆತ ಘಳಿಗೆಗಳಿಗ ಬರಿ ನೆಪ ಮಾತ್ರ,
ಮತ್ತೆ ನೆಲಕಚ್ಚಿದರೂ ಬುಡದಲ್ಲೆಲೋ ಚಿಗುರುವ ಹೆಮ್ಮರದಂತ್ತೆ,
ಬರುಡು ಭೂಮಿ ಬೆವರ ಹನಿಗಳ ಕಂಡು ಮತ್ತೆ ಮಳೆಯಾದೀತೇನು ಎಂದು ಭಾವಿಸುವಷ್ಟು,
ಮತ್ತೆ ನಿ ನನ್ನೊಳಗೆ ಸುರಿಯುವೆ ಎಂಬ ಹೆಬ್ಬಯಕೆ ಹುಸಿ ಎಂದರಿವಾದಾಗ 
ಮತ್ತೇ ನಾ ಅಂತರ್ಮುಖಿ.

                                      .............ಬಸವ.

Comments

  1. ಸಿಗುವಳು ನಿಮಗೆ ಪ್ರಾಣಸಖಿ..

    ReplyDelete
    Replies
    1. ತುಂಬಾ ಚೆನ್ನಾಗಿದೆ

      Delete
  2. Each and every lines wonderful writing

    ReplyDelete
  3. ಬಯಕೆಗಳು ಹುಸಿಯಾದಾಗ ಬದುಕುವ ಆಸೆಗಳು ಹೊರಟು ಹೋಗುತ್ತದೆ

    ReplyDelete

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ