ಒಲವ ಆಲಿಂಗನ.

ಬೆರೆಯಬೇಕು ದಾಟಿ 
ಅತ್ತಿತ್ತಲಿನ ದುಗುಡ, ದುಮ್ಮಾನಗಳ
ಮನಸುಗಳ ಬೆಸೆಯಲು ಬೇಸರಗೊಳ್ಳದೆ 
ಅಳುಕದೆ,ಅಂಜದೆ ಇದೇ ಅಂತಿಮವೆಂಬಂತ್ತೆ
ಬೆರೆತು ಬಿಡಬೇಕು ಒಪ್ಪು ತಪ್ಪುಗಳನ್ನೆಲ್ಲಾ ಒಂದೆಡೆಗಿಟ್ಟು.

ಮರೆತು ಅತಿಶಯೋಕ್ತಿ ಬೀಗು,ಬಿಂಕಗಳ
ಹೌದು ಇಲ್ಲಗಳ ಹೆಣೆಯುವುದ ನಿಲ್ಲಿಸಿ
ನಾಳೆಗೆಂದೂ ಕಾಯದೆ ಬೆರೆತುಬಿಡು
ಇಂದೇ ಇಹುದು ಸುಂದರ ಬೆಳಕು 
ಬೆರೆತು ಬಿಡು ಒಮ್ಮೆ ಮರೆತು ಮನದ ಕಗ್ಗತ್ತಲೆಗಳ.

ನಾಳೆ ಉಳಿಯುವುದಾವೊದೋ ಅಳಿಯುವುದಾವುದೋ 
ಬಿಟ್ಟು ಗಾವುದ ದೂರಕೆ ಅಸಹನೆ,ಅಹಂಕಾರಗಳ
ಬೆರೆತುಬಿಡು ಓಮ್ಮೆ ಹಬ್ಬಿದಂತ್ತೆ ಹೃದಯದಲಿ ವಿನೋದ
ಒಲ್ಲೆನೆಂದರೂ ಒಂದೊಮ್ಮೆ ಅಪ್ಪಿ ಒಪ್ಪಿಸಿ ಬೆರೆತುಬಿಡು
ಇಂದೇ ಕೊನೆ ಇರಬಹುದು ಒಲವ ಆಲಿಂಗನಕೆ.

                                             ...........ಬಸವ.

Comments

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ