ತಿಳಿ ಗಗನದ ಶಾಂತಿ.



ಯಾವ ಭೀತಿ ಭ್ರಾಂತಿಗಳಿಗೂ ಭ್ರಮಿತವಾಗದೆ
ಯಾವ ನೋವು ನಷ್ಟಗಳಿಗೂ ನೆಲಕಚ್ಚದೆ
ತೀರಿ ಹೋದ ಸಮಯಗಳ ತಿರುವಿಹಾಕದೆ
ತಿಳಿಯದಿರುವ ಸಮಯದ ತ್ವರಿತವಿಲ್ಲವಾದಾಗ
ತಿಳಿ ಗಗನದ ಶಾಂತಿಯೊಂದು ನೆಲೆಸಿದೆ ಮನದಲಿ.

ದಿನೇ ದಿನೇ ಭಾರಗೊಂಡ ಬಯಕೆಗಳನ್ನಿಳಿಸಿ
ಸಲ್ಲುವುದೇ ಸಿಕ್ಕುವುದೆಂದು ತಿಳಿದು
ಮತ್ತೆ ಮತ್ತೆ ಮರುಗಿಸುವ ಮಾಯೆಯನ್ನ ಮರೆತು
ಎಲ್ಲವೂ ಅರಿತು ಏನನ್ನೂ ನುಡಿಯದೆ ಎಲ್ಲೆಡೆ ಬೆರೆತಾಗ
ತಿಳಿ ಗಗನದ ಶಾಂತಿಯೊಂದು ಸ್ಪುಟಗೊಂಡಿದೆ ಮನದಲಿ.

ಒಳಗಡಗಿದ ನಿಟ್ಟುಸಿರುಗಳ ಹೆಕ್ಕಿ
ದಕ್ಕದ ಎಲ್ಲದಕ್ಕೊಂದು ಪೂರ್ಣವಿರಾಮವನಿಕ್ಕಿ
ಎಲ್ಲರಲ್ಲಿ ಅತ್ತು ಇಲ್ಲೇ ನಗುತ್ತಲಿರುವ ಒಲವಗನ್ನಡಿಯನ್ನ 
ಅತ್ತಿತ್ತಲೋಮ್ಮೆ ಹೊರಳಾಡಿಸಿ ಮನಸೋಇಚ್ಛೆ ನಗುವಾಗ
ತಿಳಿ ಗಗನದ ಶಾಂತಿಯೊಂದು ಸ್ಥಿತವಾಗಿದೆ ಮನದಲಿ.

                                            ..........ಬಸವ.

Comments

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ