ಕಣ್ಮುಚ್ಚದೆ ಸಾಗುತ್ತಿರಬೇಕಷ್ಟೇ.



ವ್ಯಥೆಗಳೇ ಇಲ್ಲದ ಕಥೆಗಳೆಲ್ಲಿ ಈ ಲೋಕದಲ್ಲಿ?
ಹಿತ ಹೂವಿನ ಹಾಸಿಗೆಯೋ 
ಕಲ್ಲು ಮುಳ್ಳಿನ ಹಾಸಿಗೆಯೋ,
ನಡೆಯಲಿಕೆ ನೆಲವಾದರೂ ಇದೆಯೆಂಬ 
ಭರವಸೆ ಸಾಲದೆ? ಬಾಳ ಬಂಡಿಯ ಸಾಗಿಸಲು.

ಇಲ್ಲಿ ಅಳುಗಳ ಬಿತ್ತಿ ನಗೇಪಡೆದವರಿಲ್ಲ
ಅಂತೆಯೇ ನಗೆಗಳ ಬಿತ್ತಿ ಅಳುಗಳ ಪಡೆದವರಿಲ್ಲ,
ದಕ್ಕಿದ್ದಿದು ಬಾಳ ಗೋಳು ಎಲ್ಲರಿಗೂ
ಬೆವರಿಳಿದ ಬೇಸರದಲ್ಲೂ ತುಡಿಯಬೇಕಿದೆ
ನಮ್ಮ ನಿಮ್ಮೆಲ್ಲರ ಮೋಕ್ಷ ಮಂಟಪಡೆದೆಗೆ.

ನಾವೇ ಗಳಿಸಿಕೊಂಡು ಬಂದ ಬದುಕ ಪಟ್ಟಿಯಿದು
ನಾಳೆಯೊ ಇಂದೊ ಅನುಭವಿಸಲೇಬೇಕು,
ಹೆಣಭಾರದ ಸೇಣಸಾಟವೂ ದಕ್ಕುವುದಿಲ್ಲಿ
ಸುಖ ಶಾಂತಿಯ ತೂಗುಯ್ಯಾಲೆಯೂ ದಕ್ಕುವುದಿಲ್ಲಿ,
ಕಣ್ಮುಚ್ಚುವ ಮೊದಲೇ ಕಣ್ಮುಚ್ಚದೆ ಸಾಗುತ್ತಿರಬೇಕಷ್ಠೆ.

                                                 .............ಬಸವ.


Comments

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ