ಏನೆಂದು ಪ್ರಶ್ನಿಸಲಿ ನಿನ್ನ?



ನಿನ್ನೆದುರಿಗೆ ಯಾವ ಉತ್ತರದ ಅಭಿಲಾಷೆಯಲ್ಲಿ ಪ್ರಶ್ನೆಯನ್ನಿಡಲಿ?
ನಿನ್ನ ಅಂತರಂಗವೂ ಅರಿಯದ ನಿನ್ನ ಹಲವು ತಿರುಳುಗಳ ಅರಿತಿರುವ ನನಗೆ,
ನಿನ್ನ ಹೌದು ಅಲ್ಲಗಳು ನನ್ನೇದುರಿಗೆ ಅನಾವರಣಗೊಂಡಿದ್ದರೂ,
ನಿನ್ನಲ್ಲಿಗೆ ನಾ ಕೇಳುವ ಪ್ರಶ್ನೆ ಅದೆಷ್ಟು ವರ್ಜಿತ?

ಭುಗಿಲೆದ್ದ ನಿನ್ನ ದುಃಖದ ಹೊರನೋಟ ತಗ್ಗಿಸಿದೆಯಾದರೂ,
ಸುರಿದು ಬೀಳುವ ಕಣ್ಣಿರುಗಳ ಇಂಗಿಸಿದೆಯಾದರೂ,
ಅಲ್ಲೆಲ್ಲೋ ಮರುಗುವ ನಿನ್ನ ಮನದ ಮಂದಹಾಸ
ನನ್ನೊಲವಿನೇದರು ಕಣ್ಣೀರು ಸುರಿಸುತ್ತಲೇ ಇದೆ,
ಇನ್ನಾದರೂ ನಾ ಪ್ರಶ್ನೆ ಕೇಳಬೇಕೆ?

ನಿನ್ನ ಅನಂತ ಆಸೆಗಳ ಅರಿಯುವ ನನ್ನ ಮುತವರ್ಜಿ,
ನೀನೆಂದು ಊಹಿಸದ ಅಪರಿಮಿತ ಸುಖಾನುಭವಗಳ
ಬುತ್ತಿ ಹೊತ್ತು ತರುವುದೇ ಆಗಿದೆ,
ನಿ ಮೋಡದೊಳಡಗಿದ ಚಂದ್ರನ ಬೆಳಕಂತ್ತೆ ಕಂಡರೂ
ನಿನ್ನ ಅಸ್ತಿತ್ವದ ಪ್ರಶ್ನೆ ನಾ ಹೇಗೆ ಕೇಳಲಿ?

ನಿನಗೆ ಬಾರದ ಉತ್ತರವನ್ನ ಅರಿತರೂ
ಮತ್ತದೇ ಪ್ರಶ್ನೆಗಳ ಕೇಳಿ ಪಿಡಿಸುವ ಹುಚ್ಚಾಟಕ್ಕೆ ನನ್ನದು ಗೈರು,
ತೇವಗೊಂಡ ಬಾವಿಯಂತ ನಿನ್ನ ಕಣ್ಣೋಟಗಳೋ,
ಗ್ರಹಣ ಪೀಡಿತ ಚಂದ್ರನಂತಿಹ ನಿನ್ನ ಮೊಗವೋ,
ಇಂದು ನಾ ಕೇಳದೇ ಹೋದ ಪ್ರಶ್ನೆಗಳಿಗೆ ಉತ್ತರಿಸಿವೆ.

                                                  .........ಬಸವ.

Comments

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ