ಬಿಳಿ ಹಾಳೆ.

ಮನವೆಂಬ ಬಿಳಿ ಹಾಳೆಯಲ್ಲಿ
ಮನಬಂದಂತ್ತೆ ಗೀಚದಿರು
ಅಳಿಸುವುದು ಅದು ಸುಲಭವಲ್ಲ.

ಚಂದದಂತ್ತೆ ಕಾಣುವ ಚಿತ್ರಗಳವು
ಛಿದ್ರ ಚಿತ್ತದದಿ ಮೂಡಿದ ಚಂಚಲ ಗೆರೆಗಳವು
ಮತ್ತೆ ಚಿಂತಿಸಿದರೂ ಸರಿಹೋಗದ ಬಿಗಿ ಅಚ್ಚುಗಳವು.

ಇಲ್ಲಿ ಪ್ರಾಯೋಗಿಕ ಬದುಕಿನ ಬಯಕೆಯ ಬಣ್ಣಗಳಿಹವು
ಮತ್ತೆ ಚೆಲ್ಲಿ ಮತ್ತೆ ಅಳಿಸಲೇನು ಎನ್ನಲಾಗದು
ಬಿಳಿ ಹಾಳೆಯ ಬದುಕಿದು, ಸಮುದ್ರದ ತಿರವಲ್ಲ.

ಬರಿಗಣ್ಣಿಗೂ ಕಾಣುವ ಸತ್ಯವನ್ನರಿತರು
ಮತ್ತದೇ ಆಸೆಗಳ ಚಿತ್ರ ಬಿಡಿಸುವ ಕುಚೇಷ್ಟೆಗೆ
ವಿಕಾರವಾಗಿ ಅಂದಗೆಡುತ್ತಿರುವುದು ಬಿಳಿ ಹಾಳೆಯೇ.

                                                   ...........ಬಸವ.

Comments

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ