ಏನೆಂದು ದೂಷಿಸಲಿ ಅವನನ್ನ.



ಕತ್ತಲಾಯಿತು ಎಂದಲ್ಲೇ ಬೆಳಕ ಕೊಟ್ಟವನ
ಹಸಿದ ಭುವಿಯ ದಣಿವು ತಣಿಸುವವನ
ಜೀವಕ್ಕೊಂದು ಜೀವನದೊಡಲ ಕರುಣಿಸಿದವನ
ಬೇಡದ ದುಃಖಕ್ಕೊಂದು ಅಂತ್ಯವನಿಟ್ಟವನ 
ಕಾಣದ ಸುಖವನ್ನೊಮ್ಮೆ ತಂದಿಟ್ಟವನ
ಏನೆಂದು ದೂಷಿಸಲಿ ಅವನನ್ನ.

ಭೀಕರದ ಭೀಷಣದಲ್ಲೊಂದು ಭಾವುಕತೆಯ ಕೊಟ್ಟವನು
ರೌದ್ರಿಸುವ ರಾಕ್ಷಸನಿಗೊಮ್ಮೆ ಕಣ್ಣೀರ ಸುರಿಸಿದವನು
ಕೇಳದ ಇರುವೆಯ ಹಸಿವಿಗೆ ಅನ್ನವನಿಟ್ಟವನು
ನುಡಿಯದ ಮೂಕನ ರೋಧನೆಯ ಆಲಿಸಿದವನು
ಅರಿಯಲಿಚ್ಚುಸುವವರಿಗೆ ಅಧ್ಯಾತ್ಮವ ಕೊಟ್ಟವನು
ಏನೆಂದು ದೂಷಿಸಲಿ ಅವನನ್ನ.

ಗುಡಿಯೊಳಗಿನ ಕಲ್ಲಾಗಿಯೋ
ಮರದಡಿಯ ಮಣ್ಣಾಗಿಯೋ
ಗುರುವಾಗಿಯೋ ಗುರುತಾಗಿಯೋ
ಗುರುತೇ ಇಲ್ಲದ ಅಗೋಚರವಾಗಿಯೋ
ನಾನಿಯೆಹನು ನಿನ್ನೊಡನೆಂದಿರುವನ
ಏನೆಂದು ದೂಷಿಸಲಿ ಅವನ್ನನ್ನ.

                           ...............ಬಸವ.

Comments

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ