ನಿಲ್ಲುತಿಹದು ಬದುಕು.



ನಿಲ್ಲುತಿಹದು ಬದುಕು
ಜ್ಞಾನವಿಲ್ಲದೆ,ಅರಿವಿಲ್ಲದೇ
ಗುರಿಯಿಲ್ಲದೆ,ಗುರುವಿಲ್ಲದೆ
ಒಳಿತು ಕೆಡಕುಗಳ ತಿಳಿವಿಲ್ಲದೆ
ಮಾಯೆ ಮೋಹಗಳ ಅರಿವಿಲ್ಲದೆ.

ನಿಲ್ಲುತಿಹದು ಬದುಕು
ಅದೆಲ್ಲಿ ಇದೆಲ್ಲಿ ಇಂದೆಲ್ಲಿ ಮುಂದೆಲ್ಲಿ ಎನ್ನುತ 
ಇಲ್ಲಿ ಇಂತಿರುವುದ ಕಳೆದುಕೊಂಡು,
ಅಲ್ಲೆಲ್ಲೋ ನೋಡಿ ಸಲ್ಲದೊಂದ ಬಯಸಿ
ಸಿಗಲಿಲ್ಲವೆಂದು ಸಿಕ್ಕಿರುವುದನ ಕಳೆದುಕೊಂಡು.

ನಿಲ್ಲುತಿಹದು ಬದುಕು
ಬೇಕಿಲ್ಲದ್ದನ್ನ ಬೆಟ್ಟದಷ್ಟು ಬಯಸಿ,
ಬೇರಾವುದೋ ಬೇಡದ ಬದುಕ ಬಯಸಿ,
ಸಂದ ಭಾಗ್ಯವ ಬಿಟ್ಟು ಬೇರೊಂದು ಭೋಗವ ಬಯಸಿ,
ಸಾಧಿಸುವ ಸಾಧನವರಿತರು ಸಾವಿನೆಡೆಗಟ್ಟುವ ಸುಳ್ಳಿಗೆ ಸಿಲುಕಿ.

ನಿಲ್ಲುತಿಹದು ಬದುಕು
ನಿನ್ನಂತ್ತೆ ನಾನಾಗುವದಕ್ಕೋ
ನನ್ನಂತ್ತೆ ನೀನಾಗುವದಕ್ಕೋ,
ವೆಸನಕ್ಕೋ ವ್ಯಾಮೋಹಕ್ಕೋ
ಚಿತ್ರ ವಿಚಿತ್ರ ಚಂಚಲ ಚಿತ್ತಕ್ಕೋ,
ಮತ್ತೆ ಮತ್ತೆ ನಿಲ್ಲುತಿಹದು ಬದುಕು.

                              ...........ಬಸವ.
 

Comments

  1. ನಿಲ್ಲದಿರಲಿ ಬದುಕು

    ReplyDelete
  2. ನಿಲ್ಲಲ್ಲಾರದ ಬದುಕೇ ನಿಜವಾದ ಬದುಕು.!

    ReplyDelete
  3. ಸಾಧಿಸುವ ಸಾಧನವರಿತರು ಸಾವಿನೆಡೆಗಟ್ಟುವ ಸುಳ್ಳಿಗೆ ಸಿಲುಕಿ.


    👌👌👌

    ReplyDelete
  4. ಬೇಕು ಬೇಡೆನ್ನುವದರ ಮದ್ಯೆ ಬದುಕು

    ReplyDelete
  5. ನಿಲ್ಲದಿರಲಿ ನಿಮ್ಮ ಸಾಧನೆ

    ReplyDelete
  6. ನಿಂರಂತರ ನದಿಯ ಹಾಗೆ ಸಾಗುವುದೇ ಬದುಕು....

    ReplyDelete

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ