ಇದೆ ಭುವಿಯ ಮಡಿಲ ಕುಡಿಗಳು.



ಎಲ್ಲರಿಗುಂಟು ಇದೆ ಬಾನು ಇದೆ ಇದೆ ನೆಲ
ಮತ್ತಾವ ಮೂರ್ಖತನವದು ಕಪ್ಪು ಬಿಳುಪೆನ್ನುವುದು
ಮತ್ತಾವ ಅಂಧಕಾರವಾದು ಬಡವ ಸಿರಿವಂತನೆನ್ನುವುದು
ಮತ್ತಾವ ಮಾಯೆಯದು ಉಚ್ಚ ನೀಚನೆನ್ನುವುದು
ಎಲ್ಲರೂ ಇದೆ ಭುವಿಯ ಮಡಿಲ ಕುಡಿಗಳು.

ಅಳುವು ಅಳುತ್ತಲೇ ಇರದು,ನಗುವು ನಗುತ್ತಲೇ ಇರದು
ಮತ್ತೇಕೆ ಮರುಕದಲಿ ಮರುಗುವುದು ನನಗಷ್ಟೇಎಂಬ ಭ್ರಾಂತಿಯಲ್ಲಿ
ನಗೊಂದು ಬೆಳಕ ಗಾಳಿ ನಿನಗೊಂದು ಬೆಳಕ ಗಾಳಿ ನೀಡಲಿಲ್ಲ ಅವನೆಂದು
ನಾನಳುವ ಕತ್ತಲು ನಿನಳುವ ಕತ್ತಲು ಒಂದೆಯೇ ಎಂದಿರುವಾಗ
ಅವನಿಗಿಲ್ಲದ ಇರಿಸು ಮುನಿಸು ನನ್ನ ನಿನ್ನಲ್ಲೇಕೆ?

ನೂರಾರು ಆಡಂಬರಗಳ ವಿಡಂಬನೆಗಳು 
ಮನದ ಮಾಯೆಯಂತೆ ಕುಣಿತಗಳು
ಅದರಿದರ ಆಚೆಗೆ ಇಚ್ಛೆಯೊಂದಿಹದಂತ್ತೆ
ಎಲ್ಲಾ ಬದುಕುಗಳ ಮುಖಪುಟ ಒಂದೇ ಎಂದು ತೋರಿಸುವುದಂತ್ತೆ ಅದುವೆ ಅಂತ್ಯವಂತ್ತೆ.

                                                 ..........ಬಸವ

Comments

  1. ಆಡಂಬರ ಜೀವನಕ್ಕೆ ತೆರೆ ಎಳೆದ ಹಾಗಿದೆ

    ReplyDelete
  2. proud of
    feeling pleasurable satisfaction over something by which you measures your self-worth

    ReplyDelete
  3. Bassu. Jivanada Nijavannu tilisuva.
    Shabdagalu.

    ReplyDelete

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ