ಅವನರಿತಲ್ಲಿಯೇ ಅವನಾಗುವೆವು.



ಎನಿಲ್ಲದೆ ಬಂದಿಳಿದಾಗ ಏನನ್ನೋ ಏಕೆ ಬಯಸುವುದು?
ಮಾಯೆಗಳಾಚೆ ಮಧುರ ತಿರವರಿತರು
ಮತ್ತೆ ಮಾಯೆಗೆ ಮಂಕಾಗುತಿಹದು ಚಿತ್ತ,
ನಿಲ್ಲದೆ ಓಡಿದರೂ ತಲುಪದ ಗುರಿಯನ್ನ 
ನಿದ್ರೆಯಲ್ಲಿ ಪಡೆಯುವ ಹಂಬಲವ ಬಿಟ್ಟು ಬಿಡಬೇಕಿದೆ.

ಕಾಣುವ ಕಾಯಗಳಿಗೆ ಮಾರುಹೋಗಿ
ಕಾಣದೊಂದು ಜ್ಞಾನ ಮರೆಮಾಚುತ್ತಿದೆ,
ಸಿದ್ಧಿಗಾಗಿ ಸಿಕ್ಕ ಅಂಗಾಂಗಗಳೆಲ್ಲವನ್ನ 
ವ್ಯಂಗ್ಯವಾಗಿ ಬಳಸುವ ಹುಚ್ಚುತನ
ಅರಿವಿರದ ಮುಪ್ಪಲ್ಲಿ ಅರಿವಾದಾಗ ಅಳುವಂತಾಗದಿರಲಿ.

ಬ್ರಹ್ಮವರಿತರು ಬ್ರಹ್ಮನಾಗದ ಬದುಕಲ್ಲಿ
ತಪ್ಪನ್ನರಿತರು ತೆಪ್ಪಗಿರದ ಚೇಷ್ಟೆ ಬಿಟ್ಟದ್ದಲ್ಲ,
ಅರಿವು ಅರಿಯಲೇಕೆ ಆಲಸ್ಯ?
ಮತ್ತೆಂದು ಸಿಗುವುದೆಂದು ಅರಿಯೇನು
ಅವನಿಗೊಲಿದು ಅವನಾಗುವ ಅವತಾರವ.

                                          ..........ಬಸವ.

Comments

Post a Comment

Thank you

Popular posts from this blog

ಮರೆಯಾದನೆ ಅವನು?

ಕೆಲವು ಲೆಕ್ಕಾಚಾರಗಳು.

ಅರಿಯಲೇಬೇಕಿದೆ