ಊಟಿ - ಬೆಟ್ಟಗಳಲ್ಲೊಂದು ಸ್ವರ್ಗ. ಭಾಗ-2.
ಬೆಳಿಗ್ಗೆ ಬೇಗ ಏಳುವುದು ಅಂತ ನಿರ್ಧರಿಸಿದ್ದರೂ ಎದ್ದದ್ದು ತಡವಾಗಿಯೇ. ಕಣ್ಣು ಬಿಡುತ್ತಿದ್ದಂತೆಯೇ ಸಿದ್ಲಿಂಗ್ ಊಟಿಯಲ್ಲಿ ಭೇಟಿ ಕೊಡಲೇಬೇಕಾದ ಕೆಲ ಸ್ಥಳಗಳ ಮಾಹಿತಿ ಕಲೆಹಾಕುತ್ತಿದ್ದ. ತಡವಾಗಿದ್ದಕ್ಕೆ ಬಿಸಿಲಿಗೆ ಹೆದರುವ ಅವಶ್ಯಕತೆ ಇರಲಿಲ್ಲ, ಅದು ಊಟಿ, ಅಲ್ಲಿ ಬಿಸಿಲಿನ ವರ್ಚಸ್ಸು ಕಮ್ಮಿ. ತಡ ಮಾಡದೆ ಎದ್ದು ರೆಡಿಯಾಗಿ ಅಲ್ಲೇ ಉಪಹಾರ ಮುಗಿಸಿಕೊಂಡು ಗಂಟುಮೂಟೆ ಕಟ್ಟಿಕೊಂಡೆವು. ಬೈಕಿನ ಹಿಂಬದಿಗೆ ಸಿದ್ಲಿಂಗ್ ಮತ್ತು ಲಗೇಜನ್ನ ಕುಳ್ಳಿರಿಸಿ ಮೊದಲಿಗೆ ಹೊರಟದ್ದು ಕರ್ನಾಟಕ ಪಾರ್ಕ್ ಗೆ. ಉದ್ಯಾನವನಗಳಿಗೆ ಭೇಟಿಕೊಡುವ ಮುತವರ್ಜಿ ನಮಗಂತೂ ಇರಲಿಲ್ಲ. ಹೆಸರು ಕೇಳಿ ಆಕರ್ಷಿತಗೊಂಡಿದ್ದೆವು. ಗೂಗಲ್ ಮ್ಯಾಪ್ ಹಿಂಬಾಲಿಸಿ ಒಂದೆರಡು ಕಿಮೀ ಕ್ರಮಿಸಿ, ಒಂದೆರಡೆಡೆ ಸಿಕ್ಕ ಸೆಲ್ವಂ ರನ್ನ ರಸ್ತೆ ಕೇಳಿದ್ವಿ. ಗೂಗಲ್ ಮ್ಯಾಪ್ ತೋರಿಸುವ ಸಂದಿಗಳನ್ನ ಗೊತ್ತಿಲ್ಲದ ಊರುಗಳಲ್ಲಿ ನಂಬಲಾಗದು. ಸೆಲ್ವಂ ತೋರಿದ ಮಾರ್ಗದಲ್ಲಿ ಬೈಕು ತೂರುತ್ತಿದ್ದಂತ್ತೆ ಸಂಪೂರ್ಣ ಇಳಿಜಾರು. ಊಟಿಯ ಪಾತಾಳಲೋಕಕ್ಕೆ ಹೋಗುವ ಮಾರ್ಗವಿರಬಹುದೇನೋ. ಕಣ್ಣಿಗೆ ಕಾಣಿಸುವಷ್ಟು ದೂರಕ್ಕೆ ಸಂಪೂರ್ಣ ಇಳಿಜಾರು. ಬೈಕ್ ಇಗ್ನಿಷನ್ ಆಫ್ ಮಾಡಿಯೇ ಬಿಟ್ಟೆ. ಎರಡು ಮೂರು ಕಿಮೀ ತನಕ ಇಳಿಜಾರಲ್ಲೇ ಹೋದ್ವಿ, ಎದುರಿಗೆ ಯಾವ ವಾಹನವೂ ಬರುತ್ತಿಲ್ಲ, ಬಂದರು ಅವುಗಳು ಹತ್ತಲಿಕೆ ಆಗುವುದೇ? ಆ ಪರಿಯ ಇಳಿಜಾರು. ಈ ಮಧ್ಯೆ ನಮ್ಮ ಎದೆಯಲ್ಲಿ ಶುರುವಾಗಿದ್ದ ನಡುಕ ಒಂದೇ, ಅಲ್ಲಿ ಮುಗಿಸಿಕೊಂಡು ಹಿಂತಿರುಗುವುದು