ನನ್ನ ಮನೆ.



ಅದು ನನ್ನ ಮನೆ ನನ್ನೂರಿನ ನನ್ನ ಮನೆ,
ಅದೆಷ್ಟೋ ನೆನಪುಗಳ ಬುತ್ತಿ ಬಿಚ್ಚಿಡುವ ಮನೆ,
ಅಂಬೆಗಾಲಿಟ್ಟು ಬೆಳೆದ ಮನೆ,ಅತ್ತಿತ್ತ ಜಿಗಿದಾಡಿದ ಮನೆ,
ನೆಲಕ್ಕುರುಳಿ ಅತ್ತು,ಮೇಲೆದ್ದು ನಕ್ಕು ನಲಿದಾಡಿದ ಮನೆ,
ನನ್ನ ಮನೆ ಅದು ನನ್ನೂರಿನ ಮನೆ ಅದು.

ಅಮ್ಮನ ಸೇರಗಿನಂಚು ಹಿಡಿದು ಎಲ್ಲೆಡೆ ನಾ ಸುತ್ತಾಡಿದ ಮನೆ,
ಸೋತಾಗಲೂ ಗೆದ್ದಾಗಲೂ ನಾ ಹಿಂತಿರುಗಿ ಬಂದ ಮನೆ,
ನನ್ನವರು ನನಗಾಗಿ,ನನ್ನವರಿಗಾಗಿ ನಾನು ಕಾದು ಕೂತಿರುವ ಮನೆ,
ನನ್ನ ಮನೆ ಅದು ನನ್ನೂರಿನ ಮನೆ ಅದು.


ಬಿಗು ಕಲ್ಲುಗಳಂತ್ತೆ ಸಂಬಂಧಗಳನ್ನೂ ಗಟ್ಟಿಗೊಳಿಸಿದ ಮನೆ,
ನೆರೆ ಹೊರೆಯಯವರೊಂದಿಗೆ ಬೆಸೆದು ಬೆರೆತ ಮನೆ,
ತನ್ನ ಬುನಾದಿಯಷ್ಟೇ ಅಳುಕು ಮನಸ್ಸುಗಳ ಬಿಗಿಗೊಳಿಸುವ ಮನೆ,
ನನ್ನ ಮನೆ ಅದು ನನ್ನೂರಿನ ಮನೆ ಅದು.

ನನ್ನ ಮನದಲ್ಲಿ ನೂರೆಂಟು ಖಯಾಲಿಗಳ ಬಿತ್ತಿದ ಮನೆ,
ಗೋಡೆಗಂಟಿದ ಸುಣ್ಣದಷ್ಟೇ ಸ್ಪಷ್ಟ ಪ್ರೀತಿಯ ಕೊಟ್ಟ ಮನೆ,
ಹೊರಡುವಾಗ ಮತ್ತೆ ಮತ್ತೆ ಹಿಂತಿರುಗವಂತ್ತೆ ಪಿಡಿಸುವ ಮನೆ,
ನನ್ನ ಮನೆ ಅದು ನನ್ನೂರಿನ ಮನೆ ಅದು.

                             .............ಬಸವ.

Comments

  1. ತುಂಬಾ ಚೆನ್ನಾಗಿದೆ..from satish

    ReplyDelete
  2. ನನ್ನ ಮನೆ ನನ್ನೂರಿನ ನನ್ನ ಮನೆ ಒಮ್ಮೆ ಕಣ್ಣಮುಂದೆ ಬಂತು... ಎಲ್ಲಾ ನೆನಪುಗಳು ಸರ್ರನೆ ಪಸಾಯಿತು... 😊
    - ಚೈತ್ರ

    ReplyDelete

Post a Comment

Thank you